ಬೆಂಗಳೂರು: ಅತಿಯಾದರೆ ಅಮೃತವೂ ವಿಷ ಅಂತಾರಲ್ಲ. ಅದು ಈ ಕೊರೋನಾ ವಿಚಾರದಲ್ಲಿ ನಿಜವಾಗಿದೆ. ಕೊರೋನಾ ಬಾರದಂತೆ ಆಗಾಗ ಕೈತೊಳೆಯುತ್ತಿರಿ, ಶುಚಿಯಾಗಿರಿ ಎಂದು ಸಲಹೆ ನೀಡಿದ್ದೇ ತಪ್ಪಾಯ್ತು. ಇದೀಗ ಕೆಲವರಿಗೆ ಮಾನಸಿಕ ಖಾಯಿಲೆಯಾಗಿಬಿಟ್ಟಿದೆ. ಆಗಾಗ ಕೈ ತೊಳೆಯುವುದು, ಹೋದಲ್ಲಿ ಬಂದಲ್ಲಿ ತೊಳೆದುಕೊಳ್ಳುವುದು, ಎಲ್ಲಿ ಮುಟ್ಟಿದರೆ ಏನಾಗುವುದೋ ಎಂಬ ಆತಂಕವಾಗುವುದು ಇತ್ಯಾದಿ. ಸೈಕಾಲಜಿಕಲ್ ಭಾಷೆಯಲ್ಲಿ ಇದನ್ನು ಒಂದು ಆತಂಕದ ಮನೋರೋಗ ಅಥವಾ ಗೀಳು ಮನೋರೋಗ ಎನ್ನಬಹುದು.ಇದು ಅತಿಯಾದರೆ ಮನೋವೈದ್ಯರ ಸಲಹೆ ಪಡೆದು ವೈದ್ಯಕೀಯವಾಗಿ