ಜಿಂಕ್ ಎನ್ನುವ ಮಿನರಲ್ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಮಿನರಲ್ ಬಾದಾಮಿಯಲ್ಲಿ ಹೆಚ್ಚಿದೆ. ಹಾಗಾಗಿ ಬಾದಾಮಿಯನ್ನು ಸೇವಿಸುವುದು ಉತ್ತಮ. ನಾವು ಚಿಕ್ಕವರಿದ್ದಾಗ ಬೆಳಗ್ಗೆ ನೆನೆಸಿದ ಬಾದಾಮಿ ತಿನ್ನುತ್ತಿದ್ದ ನೆನಪು, ಹಾಗೆ ನೆನೆಸಿದ ಬಾದಾಮಿ ಸಿಪ್ಪೆ ಸುಲಿದು ತಿನ್ನುವುದರಿಂದ ನನೆನಪಿನ ಶಕ್ತಿ ಹೆಚ್ಚಾಗುತ್ತದೆ ಎಂಬುದನ್ನ ಸಹ ಕೇಳಿರುತ್ತೇವೆ. ಅಲ್ಲದೇ ಮೆದುಳಿನ ಕೆಲಸವನ್ನು ಸರಾಗಗೊಳಿಸಲು ಬಾದಾಮಿ ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಬಾದಾಮಿ ನಮ್ಮ ಮೆದುಳಿನ ಶಕ್ತಿಯನ್ನು ನಿಯಂತ್ರಣದಲ್ಲಿ ಇಡುವಲ್ಲಿ ಮುಖ್ಯಪಾತ್ರವನ್ನು ವಹಿಸುತ್ತದೆ.