ಕಳೆದ ಕೆಲವು ದಿನಗಳಿಂದ ಕೊರೋನಾಗಿಂತ 10 ಪಟ್ಟು ವೇಗವಾಗಿ ಹರಡುವ ಓಮಿಕ್ರಾನ್ ಆತಂಕ ಹೆಚ್ಚಿಸಿದೆ. ಹೀಗಾಗಿ ಮಾಸ್ಕ್ಅನ್ನು ಸರಿಯಾದ ವಿಧಾನದಲ್ಲಿ ಧರಿಸುವುದು,ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳುವ ಅಭ್ಯಾಸವನ್ನು ಮರೆಯುವಂತಿಲ್ಲ.ಕೊರೋನಾ ಆರಂಭವಾದಾಗಿನಿಂದ ತಜ್ಞರು ನೀಡಿರುವ ಸಲಹೆ ಮಾಸ್ಕ್ ಧರಿಸಿವುದು. ಈ ಕಾರಣದಿಂದ ಅಂಗಡಿಗಳಲ್ಲಿ ಮಾಸ್ಕ್ಗೆ ಬೇಡಿಕೆ ಹೆಚ್ಚಿತ್ತು. ದರವೂ ದುಬಾರಿಯಾಗಿತ್ತು. ಹೀಗಾಗಿ ಮನೆಗಳಲ್ಲೇ ಬಟ್ಟೆಯ ಮಾಸ್ಕ್ಅನ್ನು ತಯಾರಿಸಿ ಉಪಯೋಗಿಸುವ ಕ್ರಮ ಜಾರಿಗೆ ಬಂದಿತು. ಆದರೆ ಈಗ ಓಮಿಕ್ರಾನ್