ಬೆಂಗಳೂರು: ಅತಿಯಾದರೆ ಅಮೃತವೂ ವಿಷ ಎನ್ನುತ್ತಾರೆ. ಅದೇ ರೀತಿ ಲೈಂಗಿಕ ಸಂಬಂಧ ಎನ್ನುವುದಕ್ಕೂ ಇದು ಅನ್ವಯಿಸುತ್ತದೆ.ಲೈಂಗಿಕ ಜೀವನ ದಂಪತಿಗಳ ನಡುವಿನ ಸಂಬಂಧ ಗಟ್ಟಿಗೊಳಿಸುವುದು ನಿಜ. ಆದರೆ ಕೆಲವೊಮ್ಮೆ ಅತಿಯಾದ ಬಯಕೆಗಳು, ಪದೇ ಪದೇ ಮಾಡುತ್ತಲೇ ಇರಬೇಕು ಎನಿಸುವ ಅತಿ ಆಸೆಯಿಂದ ಸಂಗಾತಿಗೆ ಬೇಸರವಾಗಬಹುದು.ಅತಿಯಾದ ಲೈಂಗಿಕ ಬಯಕೆಯೂ ಒಂದು ರೀತಿಯ ಖಾಯಿಲೆಯೇ. ಇದಕ್ಕೆ ಹಾರ್ಮೋನ್ ಸಮಸ್ಯೆಯೂ ಕಾರಣವಾಗಬಹುದು. ಹಾಗಾಗಿ ಇಂತಹ ಸಂದರ್ಭದಲ್ಲಿ ಲೈಂಗಿಕ ಹಾರ್ಮೋನ್ ಗಳ ಏರಿಳಿತಕ್ಕೆ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.