ನವದೆಹಲಿ: ನೋವು ನಿವಾರಕ ತಿನ್ನುವುದರಿಂದ ಅಡ್ಡ ಪರಿಣಾಮಗಳಾಗುವ ಭಯವೇ? ಹಾಗಿದ್ದರೆ ಇನ್ನು ಚಿಂತೆ ಬೇಡ. ಅಡ್ಡ ಪರಿಣಾಮಗಳಿಲ್ಲದ ನೋವು ನಿವಾರಕ ಗುಳಿಗೆಗಳನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ.ಬರ್ಲಿನ್ ವಿವಿಯ ಸಂಶೋಧಕರು ಇಂತಹದ್ದೊಂದು ಔಷಧ ಕಂಡುಕೊಂಡಿದ್ದಾರೆ. ಸಂಶೋಧಕರು ಅಭಿವೃದ್ಧಿಪಡಿಸಿದ ಹೊಸ ಔಷಧಗಳನ್ನು ಸೇವಿಸಿದಾಗ ಆರೋಗ್ಯಕರ ಅಂಗಾಂಶಗಳ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಹೀಗಾಗಿ ಇದರಿಂದ ಯಾವುದೇ ಅಡ್ಡ ಪರಿಣಾಮಗಳಾಗಲ್ಲ ಎನ್ನುವ ತೀರ್ಮಾನಕ್ಕೆ ಸಂಶೋಧಕರು ಬಂದಿದ್ದಾರೆ.ಸಾಮಾನ್ಯವಾಗಿ ನೋವು ನಿವಾರಕಗಳನ್ನು ಸೇವಿಸಿದಾಗ, ತಲೆ ಸುತ್ತು, ವಾಂತಿ,