ಬೆಂಗಳೂರು : ಹಾಗಲಕಾಯಿ ರುಚಿಯಲ್ಲಿ ಕಹಿಯಾದರೂ ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಇದನ್ನು ಎಲ್ಲರೂ ಸೇವಿಸುವ ಹಾಗಿಲ್ಲ,. ಕೆಲವು ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ಸೇವಿಸಿದರೆ ಅನಾರೋಗ್ಯಕ್ಕೊಳಗಾಗಬಹುದು. *ಮಧುಮೇಹ ಸಮಸ್ಯೆ ಇರುವವರು ಔಷಧಿಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ. ಅವರು ಈ ಹಾಗಲಕಾಯಿಯನ್ನು ಸೇವಿಸಿದರೆ ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆಯಾಗಿ ಜೀವಕ್ಕೆ ಆಪತ್ತು ಬರಬಹುದು.*ಶಸ್ತ್ರಚಿಕಿತ್ಸೆಗೆ ಒಳಗಾದವರು ಹಾಗಲಕಾಯಿಯನ್ನು ಸೇವಿಸಬೇಡಿ. ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಪರಿಣಾಮ ಬೀರಬಹುದು.*ಜೀರ್ಣ ಶಕ್ತಿ ಕಡಿಮೆ ಇರುವವರು ಹಾಗಲಕಾಯಿಯನ್ನು ಸೇವಿಸಬೇಡಿ.