ನೇಹಾ ತಾನು ಮಾಡುವ ಪ್ರತಿಯೊಂದು ಕಾರ್ಯದಲ್ಲೂ ನಿರಾಶೆಯನ್ನೇ ಅನುಭವಿಸುತ್ತಿದ್ದಳು. ತಾನು ಏನು ಕೆಲಸ ಮಾಡಿದರೂ ಅದರ ಫಲಿತಾಂಶ ತುಂಬಾ ಕೆಟ್ಟದಾಗಿರುತ್ತದೆ ಎಂಬುದು ಅವಳಲ್ಲಿ ಮನೆ ಮಾಡಿತ್ತು. ಇದರಿಂದಾಗಿ ನಿರಾಶೆ, ಜಿಗುಪ್ಸೆ ಹತಾಶೆಯಿಂದ ಅವಳು ದಿನವಿಡೀ ಕೊರಗುತ್ತಿದ್ದಳು. ಇದು ಕೇವಲ ನೇಹಾಳ ವಿಚಾರ ಮಾತ್ರವಲ್ಲ.ಸಕಾರಾತ್ಮಕ ಅಥವಾ ಧನಾತ್ಮಕವಾಗಿ ಆಲೋಚಿಸದಿರುವುದು ನಮ್ಮ ಮಾನಸಿಕ ನೆಮ್ಮದಿಯನ್ನು ಕಂಗೆಡಿಸುತ್ತದೆ. ಒಬ್ಬ ವ್ಯಕ್ತಿ ತಾನು ಮಾಡುವ ಕಾರ್ಯದಲ್ಲಿ ಒಂದೆರಡು ಸಲ ಸೋಲೆಂಬ ನಿರಾಶೆಯನ್ನು ಅನುಭವಿಸಿದ್ದಲ್ಲಿ, ಪ್ರತಿ ಬಾರಿಯೂ