ಬೆಂಗಳೂರು: ನಿಫಾ ವೈರಸ್ ಕೇರಳದಲ್ಲಿ ಈಗಾಗಲೇ ಒಂದೇ ಕುಟುಂಬದ ನಾಲ್ವರನ್ನು ಬಲಿತೆಗೆದುಕೊಂಡಿದೆ. ಈ ಮಾರಕ ರೋಗ ಹರಡದಂತೆ ತಡೆಯಲು ರಾಜ್ಯದಲ್ಲೂ ಎಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ.ಬಾವಲಿ ತಿನ್ನುವ ಹಣ್ಣುಗಳು, ಆಹಾರ ವಸ್ತುಗಳನ್ನು ನಾವು ಸೇವಿಸುವುದರಿಂದ ಈ ಖಾಯಿಲೆ ಹರಡಬಹುದು ಎಂದು ತಜ್ಞರು ಹೇಳುತ್ತಿದ್ದಾರೆ.ಹೀಗಾಗಿ ಬಾವಲಿ, ಪಕ್ಷಿಗಳು ಅರ್ಧ ಕಚ್ಚಿದ, ಕೆರೆದ ಹಣ್ಣುಗಳನ್ನು ಸೇವಿಸಬೇಡಿ. ಆದಷ್ಟು ಸಂಸ್ಕರಿತ ಹಣ್ಣುಗಳನ್ನೇ ಸೇವಿಸುವುದು ಉತ್ತಮ. ಮಾವಿನ ಹಣ್ಣು, ಸೀಬೇಕಾಯಿ, ಹಲಸಿನ ಹಣ್ಣು ಸೇವಿಸುವಾಗ ವಿಶೇಷವಾಗಿ ಎಚ್ಚರಿಕೆಯಿರಲಿ.