ಗರ್ಭಿಣಿಯರು ತಾವು ಏನು ತಿನ್ನುತ್ತಿದ್ದೇವೆ ಎನ್ನುವುದರ ಮೇಲೆ ವಿಶೇಷವಾದ ಗಮನವನ್ನು ಹರಿಸಬೇಕಾಗುತ್ತದೆ. ಏಕೆಂದರೆ ಅವರು ಸೇವಿಸುವ ಆಹಾರವು ಮಗುವಿನ ಮೇಲೆಯೂ ಸಹ ಪರಿಣಾಮವನ್ನು ಬೀರುತ್ತದೆ. ಗರ್ಭವತಿಯರಾದ ನಂತರ ಮಹಿಳೆಯರಿಗೆ ತಮ್ಮ ನಡೆನುಡಿಗಳನ್ನು ಮತ್ತು ಆಹಾರ ವಿಧಾನಗಳ ಕುರಿತು ತಿಳಿದುಕೊಳ್ಳಬೇಕಾಗುತ್ತದೆ. ಹಾಗಾಗಿ ಗರ್ಭಿಣಿ ಮಹಿಳೆಯರು ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು ಎನ್ನುವುದನ್ನು ತಿಳಿದುಕೊಳ್ಳಲು ಈ ಲೇಖನವನ್ನು ಓದಿ. *ಬೆಳಗಿನ ತಿಂಡಿಯನ್ನು ಮರೆಯಬಾರದು: ಧಾನ್ಯಗಳು ಮತ್ತು ಹಣ್ಣುಗಳಿಂದ ಕೂಡಿದ ಉಪಹಾರವನ್ನು ಪ್ರಯತ್ನಿಸಿ. ಧಾನ್ಯಗಳಲ್ಲಿ