ಬೆಂಗಳೂರು: ಮಧ್ಯ ವಯಸ್ಸು ದಾಟಿದ ಮೇಲೆ ಮಹಿಳೆ ಮುಟ್ಟು ನಿಲ್ಲುವ ಪ್ರಕ್ರಿಯೆಯಲ್ಲಿ ಹಲವು ಸಮಸ್ಯೆಗಳಿಗೆ ಒಳಗಾಗುತ್ತಾಳೆ. ಈ ಸಂದರ್ಭದಲ್ಲಿ ಆಕೆಯಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಲವು ಬದಲಾವಣೆಗಳಾಗುತ್ತವೆ. ಅದರಲ್ಲೂ ಆ ಸಂದರ್ಭದಲ್ಲಿ ಲೈಂಗಿಕಾಸಕ್ತಿ ಕುಂಠಿತವಾಗುವುದು ಅಥವಾ ಲೈಂಗಿಕಾಸಕ್ತಿ ಇದ್ದರೂ ರತಿಕ್ರೀಡೆ ಮಾಡಲು ದೇಹ ಸಹಕರಿಸದು.ವಿಶೇಷವಾಗಿ ಮುಟ್ಟು ನಿಂತ ಮೇಲೆ ಮಹಿಳೆಯರಿಗೆ ಒಣ ಯೋನಿ ಸಮಸ್ಯೆಯಿಂದ ಲೈಂಗಿಕ ಕ್ರಿಯೆ ಮಾಡುವಾಗ ನೋವು, ಉರಿ ಇತ್ಯಾದಿ ಸಮಸ್ಯೆಗಳು ಬರಬಹುದು. ಒಂದು ವೇಳೆ ಸಂಗಾತಿಗೆ