ಆರೋಗ್ಯವಾಗಿರಬೇಕಾದರೆ ನಮ್ಮ ಆಹಾರ ಕ್ರಮದಲ್ಲಿ ತರಕಾರಿಗಳು ತಪ್ಪದೆ ಇರಬೇಕು. ವಾರದಲ್ಲಿ 4-5 ದಿನವಾದರೂ ತರಕಾರಿಗಳ ಸೇವನೆ ಮಾಡಬೇಕು. ಒಂದೊಂದು ಬಗೆಯ ತರಕಾರಿಗಳಲ್ಲಿ ಒಂದೊಂದು ರೀತಿಯ ಪೋಷಕಾಂಶಗಳಿದ್ದು, ಇದು ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದು. ಹಲವಾರು ಬಗೆಯ ಪೋಷಕಾಂಶಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ತರಕಾರಿಯೆಂದರೆ ಅದು ಮೂಲಂಗಿ. ತೂಕ ಇಳಿಸಲು ಸಹಕಾರಿ ಕಡಿಮೆ ಕ್ಯಾಲರಿ ಹೊಂದಿರುವ ಮೂಲಂಗಿ ತೂಕ ಇಳಿಸಲು ಸಹಕಾರಿ. ಆಹಾರದ ನಾರಿನಾಂಶವು ಹೊಟ್ಟೆಯಲ್ಲಿ ತೃಪ್ತಿ ಉಂಟು ಮಾಡುವುದು, ಪದೇ