ಅತಿಯಾದ ಕೆಮ್ಮು ಅಥವಾ ಅಸ್ತಮಾ ಸಮಸ್ಯೆಗೆ ತುರ್ತು ಮನೆ ಮದ್ದು ಯಾವುದಾದರೂ ಇದೆ ಎಂದರೆ ಅದು ಬ್ಲ್ಯಾಕ್ ಕಾಫಿ ಎಂದು ಹೇಳಬಹುದು. ಏಕೆಂದರೆ ಎಮರ್ಜೆನ್ಸಿ ಸಂದರ್ಭದಲ್ಲಿ ಆರೋಗ್ಯವನ್ನು ರಕ್ಷಣೆ ಮಾಡುವ ಗುಣಲಕ್ಷಣ ಇದರಲ್ಲಿದೆ. ವಾರ್ಷಿಕವಾಗಿ ಹಲವಾರು ಸಾವು-ನೋವುಗಳು ಅಸ್ತಮಾ ಸಮಸ್ಯೆಯಿಂದ ಸಂಭವಿಸುತ್ತಿವೆ ಎಂಬುದು ವಿಶ್ವ ಆರೋಗ್ಯ ಸಂಸ್ಥೆ ಬಹಿರಂಗಪಡಿಸಿದ ಒಂದು ಮಾಹಿತಿಯ ವರದಿಯಲ್ಲಿ ಕಂಡುಬಂದಿದೆ. ಹೀಗಾಗಿ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.