ಬೆಳ್ಳುಳ್ಳಿ ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವಂಥಹ ವಸ್ತುವಾಗಿದೆ. ಇದನ್ನು ಸಾಮಾನ್ಯವಾಗಿ ಒಗ್ಗರಣೆಗೆ ಬಳಸಲಾಗುತ್ತದೆ. ಇದು ಯಾವುದೇ ಆಹಾರದ ರುಚಿ ಮತ್ತು ಪರಿಮಳವನ್ನು ಹೆಚ್ಚಿಸುತ್ತದೆ. ಹಸಿ ಬೆಳ್ಳುಳ್ಳಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಬೆಳ್ಳುಳ್ಳಿ ಔಷಧೀಯ ಗುಣಗಳಿಂದ ತುಂಬಿದೆ. ಬೆಳ್ಳುಳ್ಳಿಯಲ್ಲಿ ಆಯಂಟಿ ಬಯೋಟಿಕ್, ಆಯಂಟಿ ವೈರಲ್, ಆಯಂಟಿ ಫಂಗಲ್, ಮ್ಯಾಂಗನೀಸ್, ಪೊಟ್ಯಾಶಿಯಂ, ಕಬ್ಬಿಣ, ಕ್ಯಾಲ್ಸಿಯಂ ಮತ್ತು ವಿಟಮಿನ್ ಗಳಂತಹ ಗುಣಗಳಿದ್ದು, ಇದು ನಮ್ಮ ದೇಹವನ್ನು ಹಲವು ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.