ಬೆಂಗಳೂರು : ಸಾಮಾನ್ಯವಾಗಿ ಹೆಚ್ಚಿನವರಿಗೆ ಎದೆನೋವು ಸಮಸ್ಯೆ ಕಾಣಿಸುತ್ತದೆ. ಈ ಎದೆನೋವು ಕಡಿಮೆಯಾಗಲು ಈ ಮನೆಮದ್ದನ್ನು ಬಳಸಿ. ಕೊತ್ತಂಬರಿ ಸೊಪ್ಪನ್ನು ಎಳೆನೀರಿನೊಂದಿಗೆ ರುಬ್ಬಿ, ಕಲ್ಲುಸಕ್ಕರೆ, ಏಲಕ್ಕಿ ಪುಡಿ ಸೇರಿಸಿ ದಿನವೂ ಒಂದು ಭಾರಿ ಸೇವಿಸುತ್ತಿದ್ದರೆ ಎದೆನೋವು ಕಡಿಮೆ ಆಗುವುದು. ಕೊತ್ತಂಬರಿ ಬೀಜವನ್ನು ಕುಟ್ಟಿ ಪುಡಿ ಮಾಡಿ ಅದನ್ನು ನೀರಿನಲ್ಲಿ ನೆನೆಹಾಕಬೇಕು. ಚೆನ್ನಾಗಿ ಕಿವಿಚಿ ಸೋಸಬೇಕು. ಈ ಕಷಾಯಕ್ಕೆ ಹಾಲು, ಸಕ್ಕರೆ ಬೆರೆಸಿ ಸೇವಿಸಿದರೆ ಆಗಾಗ ಕಾಡುವ ಎದೆ ನೋವು ಕಡಿಮೆಯಾಗುತ್ತದೆ.