ಬೆಂಗಳೂರು : ನಾನು 45 ವರ್ಷದ ವ್ಯಕ್ತಿ. ನಾನು ಕಳೆದ 2 ವರ್ಷಗಳಿಂದ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಔಷಧ ತೆಗೆದುಕೊಳ್ಳುತ್ತಿದ್ದರಿಂದ ಇದು ನಿಯಂತ್ರಣದಲ್ಲಿದೆ. ನನ್ನ ಹೆಂಡತಿಗೆ 42 ವರ್ಷ. ಕಳೆದ ಒಂದೂವರೆ ವರ್ಷದಿಂದ ಋತುಬಂಧ ತಲುಪಿದ್ದಾಳೆ. ನಾನು ಲೈಂಗಿಕತೆಯಲ್ಲಿ ಬಹಳ ಉತ್ಸುಕನಾಗಿದ್ದೇನೆ. ಈಗ ಸಮಸ್ಯೆ ಏನೆಂದರೆ ಒಂದು ವರ್ಷದಿಂದ ನನಗೆ ಸ್ಖಲನವಾಗುತ್ತಿಲ್ಲ. ನನ್ನ ಸ್ನೇಹಿತರೊಬ್ಬರು ಮಧುಮೇಹದಿಂದ ನನಗೆ ಹೀಗಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಇದರಿಂದ ಲೈಂಗಿಕ ಆನಂದ ಅನುಭವಿಸಲು ಸಾಧ್ಯವಾಗುತ್ತಿಲ್ಲ. ನಾನು ಏನು ಮಾಡಲಿ?