ರುದ್ರಾಕ್ಷಿಗೂ ಧಾರ್ಮಿಕತೆಗೂ ನಂಟು ಹೆಚ್ಚು. ಹಿಂದೂ ಧರ್ಮದ ಜೊತೆಗೆ ಥಳುಕು ಹಾಕಿಕೊಂಡಿರುವ ರುದ್ರಾಕ್ಷಿಯಿಂದ ನಿಜವಾಗಿಯೂ ಆರೋಗ್ಯಕ್ಕೆ ಅನೇಕ ಉಪಯೋಗಗಳಿವೆ ಎಂಬುದು ಹಲವರಿಗೆ ತಿಳಿದಿಲ್ಲ. ಆಯುರ್ವೇದಕ್ಕೆ ಎಷ್ಟು ಹಳೆಯ ಇತಿಹಾಸವಿದೆಯೋ ಹಾಗೆಯೇ ರುದ್ರಾಕ್ಷಿಗೂ ಅಂಥದ್ದೇ ಇತಿಹಾಸವಿದೆ. ಆರೋಗ್ಯಕರ ನೆಮ್ಮದಿಯ ಜೀವನಕ್ಕೆ ನಂಟೂ ಇದೆ. ಋಷಿ ಮುನಿಗಳ ಏಕಾಗ್ರತೆ, ರೋಗವಿಲ್ಲದೆ ಬದುಕುತ್ತಿದ್ದುದಕ್ಕೂ ಈ ರುದ್ರಾಕ್ಷಿಯೂ ಕಾರಣ. ಇಂತಿಪ್ಪ ರುದ್ರಾಕ್ಷಿಯತ್ತ ಇದೀಗ ವಿದೇಶೀಯರೂ ಆಕರ್ಷಿತರಾಗುತ್ತಿದ್ದಾರೆ. ಜೊತೆಗೆ, ರುದ್ರಾಕ್ಷಿ ಫ್ಯಾಷನ್ ಸ್ಟೇಟ್ಮೆಂಟ್ ಕೂಡಾ ಆಗಿ ಬದಲಾಗುತ್ತಿದೆ.