ದುಬಾರಿ ಹೂವು ಎಂದೇ ಪರಿಗಣಿಸಲಾಗಿರುವ ಕೇಸರಿಯನ್ನು ವಿವಿಧ ಬಗೆಯ ಖಾದ್ಯಗಳು ಹಾಗೂ ಪಾನೀಯಗಳಲ್ಲಿ ಬಳಕೆ ಮಾಡುತ್ತೇವೆ. ಇದನ್ನು ಸೇವನೆ ಮಾಡಿದರೆ, ಅದರಿಂದ ಹಲವಾರು ಬಗೆಯ ಆರೋಗ್ಯ ಲಾಭಗಳು ದೇಹಕ್ಕೆ ಸಿಗುವುದು. ರುಚಿ, ಬಣ್ಣ ಹಾಗೂ ಸುವಾಸನೆ ನೀಡುವಂತಹ ಕೇಸರಿಯು ಹಲವಾರು ಬಗೆಯ ಔಷಧೀಯ ಗುಣಗಳನ್ನು ಹೊಂದಿದೆ. ಇದು ಕ್ಯಾನ್ಸರ್ ವಿರುದ್ಧ ಹೋರಾಡುವುದು ಮಾತ್ರವಲ್ಲದೆ, ಕೆಲವೊಂದು ದೀರ್ಘಕಾಲಿಕ ಅನಾರೋಗ್ಯಗಳನ್ನು ದೂರವಿಡುವುದು. ಆಂಟಿಆಕ್ಸಿಡೆಂಟ್ ನಿಂದ ಸಮೃದ್ಧವಾಗಿರುವ ಇದು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು.