ಬೆಂಗಳೂರು : ಅದೆಷ್ಟೋ ಜನರು ಉಗುರಿನಲ್ಲಿ ಬಿಳಿ ಕಲೆಗಳಾಗುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಲ್ಯುಕೋನಿಚಿಯಾ ಕಾರಣದಿಂದಲೂ ಕೂಡ ಆಗಿರಬಹುದು. ಇದು ಹೆಚ್ಚಾಗಿ ಕೈ ಹಾಗೂ ಕಾಲಿನ ಉಗುರುಗಳಲ್ಲಿ ಕಂಡುಬರುತ್ತದೆ. ನೈಸರ್ಗಿಕವಾಗಿ ಮನೆಯಲ್ಲಿ ಹೇಗೆ ಸುಲಭವಾಗಿ ಈ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು ಎಂಬುದು ಇಲ್ಲಿದೆ ನೋಡಿ. ನಿಂಬೆರಸ ಹಾಗೂ ಆಲಿವ್ ಆಯಿಲ್ : ನಿಂಬೆಯ ರಸದಲ್ಲಿರುವ ವಿಟಮಿನ್ ಸಿ ಅಂಶವು ಉಗುರಿನಲ್ಲಾದ ಬಣ್ಣದ ಬದಲಾವಣೆ ಮತ್ತು ಬಿಳಿ ಚುಕ್ಕಿಗಳನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗಿ ವರ್ತಿಸುತ್ತದೆ.