ಬೆಂಗಳೂರು : ತಲೆಹೊಟ್ಟು ಎಲ್ಲರಿಗೂ ಇರುವ ಒಂದು ಸಾಮಾನ್ಯ ಸಮಸ್ಯೆ. ಇದು ಧೂಳಿನಿಂದಾಗಿ, ಕೂದಲಿನಲ್ಲಿ ತೇವಾಂಶ ಕಡಿಮೆಯಾಗುವುದರಿಂದ ತಲೆಯಲ್ಲಿ ಹೊಟ್ಟು ಆಗುತ್ತದೆ. ಇದಕ್ಕೆ ಕೆಲವು ಮನೆಮದ್ದುಗಳಿವೆ. ಅದರಿಂದ ತಲೆಹೊಟ್ಟನ್ನು ನಿವಾರಿಸಬಹುದು. ಮೊದಲಿಗೆ 2 ಚಮಚ ಕೊಬ್ಬರಿ ಎಣ್ಣೆಗೆ, 1 ಚಮಚ ನಿಂಬೆರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಆಗ ಅದು ಪೇಸ್ಟ್ ಹದಕ್ಕೆ ಬರುತ್ತೆ. ನಂತರ ಅದನ್ನುಕೂದಲಿಗೆ ಹಚ್ಚಿ ರಾತ್ರಿಯಿಡಿ ಹಾಗೆ ಇಟ್ಟು ಬೆಳಿಗ್ಗೆ ಬಿಸಿ ನೀರಿನಲ್ಲಿ ಸ್ನಾನ ಮಾಡಿ.