ಬೆಂಗಳೂರು: ಸಂಗಾತಿ ಮೊದಲಿನಂತಿಲ್ಲ. ಇಬ್ಬರ ನಡುವೆ ಅಂತರ ಜಾಸ್ತಿಯಾಗಿದೆ. ಶಾರೀರಿಕ ಸಂಬಂಧ, ರೊಮ್ಯಾನ್ಸ್ ಇಬ್ಬರ ನಡುವೆ ಮೊದಲಿನಂತಿಲ್ಲ ಎಂದು ಬೇಸರ ಪಡುತ್ತಾರೆ. ತನ್ನನ್ನು ಬಿಟ್ಟು ಸಂಗಾತಿ ಬೇರೆಯವರ ಸಂಬಂಧ ಮಾಡುತ್ತಿದ್ದಾರೆ ಎಂಬ ಸಂಶಯವಿರುತ್ತದೆ. ಆದರೆ ಇದಕ್ಕೆ ಕಾರಣ ಬೇರೆ ಸಂಬಂಧವಲ್ಲ. ಅವರಿಗೆ ಸೆಕ್ಸ್ ಬಗ್ಗೆ ಯಾಕೆ ಆಸಕ್ತಿ ಇಲ್ಲ ಎಂಬುದನ್ನು ಮೊದಲು ತಿಳಿದುಕೊಳ್ಳಿ. ಶಾರೀರಿಕ ಸಂಬಂಧದಿಂದ ದೂರವಿರಲು ಒತ್ತಡ ಒಂದು ಕಾರಣ. ಸಂಗಾತಿ ಜೊತೆ ಮಾತನಾಡಿ ಒತ್ತಡಕ್ಕೆ ಪರಿಹಾರ ಕಂಡುಕೊಳ್ಳಿ.