ಬೆಂಗಳೂರು: ಇಂದಿನ ಜೀವನ ಶೈಲಿಯೇ ಹಾಗಿದೆ. ಹಲವು ವೃತ್ತಿಗಳಲ್ಲಿ ಪಾಳಿ ಆಧಾರದಲ್ಲಿ ಕೆಲಸ ಮಾಡಬೇಕಾಗುತ್ತದೆ. ಇನ್ನು ಕೆಲವರಿಗೆ ಒಂದು ವಾರ ರಾತ್ರಿ ಇನ್ನೊಂದು ವಾರ ಹಗಲು ಈ ರೀತಿ ಬೇರೆ ಬೇರೆ ಪಾಳಿಯಲ್ಲಿ ಕೆಲಸ ಮಾಡಬೇಕಾಗುತ್ತದೆ.ಆದರೆ ಹೀಗೆ ಮಾಡುವುದರಿಂದ ಸೆಕ್ಸ್ ಲೈಫ್ ಜತೆಗೆ ಪುರುಷರ ಪುರುಷತ್ವಕ್ಕೂ ಕುತ್ತು ಬರುತ್ತದೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ.ಆಗಾಗ ಶಿಫ್ಟ್ ಚೇಂಜ್ ಮಾಡುವುದರಿಂದ ಪುರುಷರಲ್ಲಿ ಆರೋಗ್ಯಕರ ವೀರ್ಯಾಣುಗಳ ಸಂಖ್ಯೆ ಕೊರತೆಯಾಗುತ್ತದೆ. ಇದರಿಂದ ಮಕ್ಕಳಾಗುವುದಕ್ಕೆ ಸಮಸ್ಯೆಯಾಗುತ್ತದೆ.