ಬೆಂಗಳೂರು: ಕ್ಯಾಲ್ಶಿಯಂ ಅಂಶ ಕಡಿಮೆ ಎಂದು ಕ್ಯಾಲ್ಶಿಯಂ ಮಾತ್ರೆ ನಿಯಮಿತವಾಗಿ ತೆಗೆದುಕೊಳ್ಳುತ್ತೀರಾ? ಹಾಗಿದ್ದರೆ ಎಚ್ಚರ! ಕ್ಯಾಲ್ಶಿಯಂ ಅಂಶದ ಮಾತ್ರೆಗಳನ್ನು ಹೆಚ್ಚು ತೆಗೆದುಕೊಳ್ಳುವುದರಿಂದ ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ! ಮಾಂಸಖಂಡಗಳ ಸೆಳೆತ ಕ್ಯಾಲ್ಶಿಯಂ ಔಷಧಗಳ ಸೇವನೆಯಿಂದ ಮಾಂಸಖಂಡಗಳ ಸೆಳೆತ ಉಂಟಾಗುವ ಸಾಧ್ಯತೆಯಿದೆ. ಅಂತಹ ಸಂದರ್ಭದಲ್ಲಿ ಅವುಗಳನ್ನು ತಕ್ಷಣ ನಿಲ್ಲಿಸುವುದು ಒಳ್ಳೆಯದು.ಮಲಬದ್ಧತೆ ಕ್ಯಾಲ್ಶಿಯಂ ಔಷಧವನ್ನು ಸೇವಿಸುವುದರಿಂದ ಮಲಬದ್ಧತೆ ಉಂಟಾಗಬಹುದು. ಕ್ಯಾಲ್ಶಿಯಂ ಔಷಧಗಳ ಅತಿಯಾದ ಬಳಕೆ ಹೊಟ್ಟೆಯಲ್ಲಿ ಕಿರಿ ಕಿರಿ, ಕೆಳಹೊಟ್ಟೆ ನೋವು