ಬೆಂಗಳೂರು: ಮೊಡವೆ ಮುಖದ ಅಂದವನ್ನೇ ಹಾಳು ಮಾಡುತ್ತಿದೆಯೇ? ಕ್ರೀಂ ಹಚ್ಚಿ ಸಾಕಾಗಿದೆಯೇ? ಹಾಗಿದ್ದರೆ ಮನೆಯಲ್ಲೇ ಮಾಡಬಹುದಾದ ಈ ಸುಲಭ ವಿಧಾನ ಮಾಡಿ ನೋಡಿ. ಮುಖದ ಮೇಲೆ ದಪ್ಪ ಮೊಡವೆ ಬಿದ್ದು, ಊದಿಕೊಂಡಂತೆ ಇದ್ದರೆ, ಐಸ್ ಕ್ಯೂಬ್ ಸಹಾಯಕ್ಕೆ ಬರಬಹುದು. ಇದು ಆ ಜಾಗದಲ್ಲಿ ರಕ್ತ ಸಂಚಾರ ಸುಗಮಗೊಳಿಸಿ, ಚರ್ಮದಲ್ಲಿ ಅಂಟಿಕೊಂಡ ಕೊಳೆಯನ್ನು ನಾಶ ಮಾಡುತ್ತದೆ.ಅದಕ್ಕಾಗಿ ಮಾಡಬೇಕಾಗಿರುವು ಇಷ್ಟೇ. ಐಸ್ ತುಂಡನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಮೊಡವೆ ಇರುವ ಜಾಗದಲ್ಲಿ ಉಜ್ಜಿಕೊಳ್ಳಿ.