ಬೆಂಗಳೂರು : ವ್ಯಾಯಾಮ, ಯೋಗ, ಜಿಮ್ ಯಾವುದನ್ನೂ ಮಾಡಲು ಸಾಧ್ಯವಾಗದವರಿಗೆ ಬೆಸ್ಟ್ ಎಂದರೆ ವಾಕಿಂಗ್. ಇದಕ್ಕೆ ಯಾವುದೇ ಸಲಕರಣೆಗಳು, ಇಂತಹದ್ದೇ ಚಪ್ಪಲಿ, ಬೂಟು ಎಂದೇನು ಬೇಕಾಗಿಲ್ಲ. ರಸ್ತೆ ಅಥವಾ ಪಾರ್ಕು ಯಾವುದಾದರೂ ಸರಿ. ಬಿರಬಿರನೆ ಹೆಜ್ಜೆ ಹಾಕಿದರೆ ಸಾಕು. ವಾಕಿಂಗ್ನಿಂದ ಹಲವಾರು ಪ್ರಯೋಜನಗಳಿವೆ ಎನ್ನುತ್ತಿದ್ದಾರೆ ವೈದ್ಯರು. ಹಾಗೇ ಮಿದುಳಿನ ಕ್ರಿಯಾಶೀಲತೆಯನ್ನು ಹೆಚ್ಚಿಸುವ ಕೆಲಸವನ್ನು ಕೂಡ ಇದು ಮಾಡುತ್ತದೆಯಂತೆ. ಹೌದು, ಇತ್ತೀಚಿನ ಸಂಶೋಧನೆಯೊಂದು ಇಂಥದ್ದೊಂದು ಅಂಶವನ್ನು ಬಹಿರಂಗ ಪಡಿಸಿದೆ. ನಡೆದಾಡಿ, ಓಡಾಡಿ