ಆರೋಗ್ಯದಲ್ಲಿ ಸೀತಾಫಲದ ಉಪಯೋಗಗಳು

ಬೆಂಗಳೂರು, ಶುಕ್ರವಾರ, 8 ಜೂನ್ 2018 (14:12 IST)

ರುಚಿಕರ ಹಣ್ಣಾದರೂ ಬೀಜಗಳನ್ನು ಬೇರ್ಪಡಿಸಿ ತಿನ್ನುವುದು ಸ್ವಲ್ಪ್ ಕಷ್ಟ. ಇದು ತಿನ್ನಲು ಎಷ್ಟು ರುಚಿಕರವಾಗಿದಿಯೋ ಅಷ್ಟೇ ಕಾಯಿಲೆಗಳಿಗೂ ರಾಮಬಾಣವಾಗಿದೆ. ಸೀತಾಫಲ ವಿಟಮಿನ್ ಎ, ಮೆಗ್ನಿಷಿಯಂ, ಪೊಟಾಷಿಯಂ, ಫೈಬರ್, ವಿಟಮಿನ್ ಬಿ6, ಕಾಲ್ಸಿಯಂ, ವಿಟಮಿನ್ ಸಿ, ಐರನ್ ನಂತಹ ಅನೇಕ ಪೋಷಕಾಂಶಗಳನ್ನು ಹೊಂದಿವೆ.
- ಸೀತಾಫಲದ ಎಲೆಗಳಿಂದ ತೆಗೆದ ರಸವನ್ನು ಪ್ರತಿದಿನ ಬೆಳಿಗ್ಗೆ ಒಂದು ಟೀ ಚಮಚ ಅಳತೆಯಲ್ಲಿ ಸೇವಿಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ ಹಾಗು ತೂಕವನ್ನು ಸಹ ಕಡಿಮೆ ಮಾಡುತ್ತದೆ.
 
- ಸೀತಾಫಲದ ಗಿಡದ ತೊಗಟೆಯನ್ನು ಜಜ್ಜಿ ಸ್ವಲ್ಪ ನೀರಿನೊಂದಿಗೆ ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಈ ನೀರಿಗೆ ಜೇನು ತುಪ್ಪ ಬೆರೆಸಿ ಕುಡಿದರೆ ಜ್ವರ, ಕೆಮ್ಮು ಕಡಿಮೆಯಾಗುತ್ತದೆ.
 
- ಸೀತಾಫಲದಲ್ಲಿ ವಿಟಮಿನ್ ಎ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ದೃಷ್ಟಿ ಸಮಸ್ಯೆಗಳನ್ನು ದೂರ ಮಾಡುತ್ತದೆ.
 
- ಹೊಟ್ಟೆ ಉರಿ ಮತ್ತು ದಾಹವಿದ್ದರೆ ಸೀತಾಫಲ ಹಣ್ಣಿನ ರಸಕ್ಕೆ ಸಕ್ಕರೆ ಸೇರಿಸಿ ಸೇವಿಸಬೇಕು ಮತ್ತು ಹೊಟ್ಟೆ ಮೇಲೆ ಲೇಪನ ಮಾಡಿದರೆ, ದಾಹ ನಿವಾರಣೆಯಾಗುತ್ತದೆ.
 
- ಸೀತಾಫಲದ ಎಲೆಗಳನ್ನು ನೀರಿನಲ್ಲಿ ಹಾಕಿ ಕಷಾಯ ದಂತೆ ಕಾಯಿಸಿಕೊಂಡ ಕುಡಿದರೆ ನೆಗಡಿ ಕಡಿಮೆಯಾಗುತ್ತದೆ.
 
- ಸೀತಾಫಲವನ್ನು ಬೆಳಿಗ್ಗೆ ಉಪಹಾರವಾಗಿ ಸೇವಿಸಿದರೆ ನರಗಳ ಬಲಹೀನತೆ ನಿವಾರಣೆಯಾಗುತ್ತದೆ.
 
- ಗಾಯ ಮುಂತಾದ ಚರ್ಮ ರೋಗಗಳಿಗೆ ಸೀತಾಫಲದ ಎಲೆಗಳನ್ನು ನುಣ್ಣಗೆ ಅರಿದು ಹಚ್ಚಿ.
 
- ಶರೀರದಲ್ಲಿ ಉಷ್ಣಾಂಶ ಹೆಚ್ಚು ಇರುವವರು, ಚಿಕ್ಕ ಮಕ್ಕಳು, ಬಾಣಂತಿಯರು ಈ ಸೀತಾಫಲವನ್ನು ತಿಂದರೆ ಒಳ್ಳೆಯ ಪೋಷಕಾಂಶಗಳನ್ನು ಸಿಗುತ್ತದೆ.
 
- ಹಿಮೋಗ್ಲೋಬಿನ್ ಕಣಗಳು ರಕ್ತದಲ್ಲಿ ಕಡಿಮೆ ಇದ್ದರೆ ಪ್ರತಿದಿನ ಸೀತಾಫಲವನ್ನು ಸೇವಿದರೆ ಹಿಮೋಗ್ಲೋಬಿನ್‌ ಪ್ರಮಾಣ ಹೆಚ್ಚುತ್ತದೆ.
 
- ಸೀತಾಫಲ ಗಿಡದ ಎಲೆಗಳನ್ನು ಜಜ್ಜಿ ಕುರುವಿನ ಮೇಲೆ ಕಟ್ಟಿದರೆ, ಕುರು ಬೇಗ ಮಾಯುತ್ತದೆ.
 
- ಸೀತಾಫಲ ಗಿಡದ ತೊಗಟೆಯನ್ನು ಜಜ್ಜಿ ಕಷಾಯಾ ತಯಾರಿಸಿ ಸೇವಿಸಿದರೆ ಭೇದಿ, ಆಮಶಂಕೆ ಗುಣವಾಗುತ್ತದೆ.
 
- ಸೀತಾಫಲದಲ್ಲಿರುವ ಮೆಗ್ನಿಷಿಯಂ ಹೃದಯ ಸಂಬಂಧಿ ಕಾಯಿಗಳು ಬರದಂತೆ ತಡೆಯುತ್ತದೆ. ಇವುಗಳಲ್ಲಿರುವ ಪೋಷಕಾಂಶಗಳು ಶರೀರದಲ್ಲಿರುವ ಕೊಬ್ಬನ್ನು ಕರಗಿಸುತ್ತದೆ.
 
- ಸೀತಾಫಲದಲ್ಲಿರುವ ಕ್ಯಾಲಿಯಂನಂತಹ ಪೋಷಕಾಂಶಗಳಿಂದ ಮೂಳೆಗಳು ಗಟ್ಟಿಗೊಳ್ಳುತ್ತವೆ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕಿಡ್ನಿಯ ಆರೋಗ್ಯವನ್ನು ಹೀಗೂ ಹೆಚ್ಚಿಸಬಹುದು

ಮೂತ್ರಪಿಂಡಗಳು ನಿಜಕ್ಕೂ ವಿಸ್ಮಯಕಾರಿ ಅಂಗಗಳು. ನಿಜವಾಗಿ ಅವುಗಳಿಗೆ ನೀಡಬೇಕಾದ ಕಾಳಜಿಯನ್ನು ನಾವು ...

news

ಮೂತ್ರ ಪಿಂಡಗಳನ್ನು ಶುದ್ಧಿಕರಿಸುತ್ತದೆಯಂತೆ ಈ ಸೊಪ್ಪಿನ ಕಷಾಯ

ಬೆಂಗಳೂರು : ಮಾನವ ದೇಹಕ್ಕೆ ಮೂತ್ರ ಪಿಂಡಗಳು ತುಂಬಾನೇ ಸಹಕಾರಿಯಾಗಿದೆ. ದೇಹದಲ್ಲಿನ ಕಲ್ಮಶಗಳನ್ನು ...

news

ಹೊಟ್ಟೆ ಉಬ್ಬರದ ಸಮಸ್ಯೆಗೆ ಪರಿಹಾರಗಳು

ಇತ್ತೀಚಿನ ದಿನಗಳಲ್ಲಿ ಹೊಟ್ಟೆ ಉಬ್ಬರ ನಮ್ಮಲ್ಲಿ ಕಾಡುವಂತಹ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಕೆಲವೊಮ್ಮೆ ...

news

ಸೆಕ್ಸ್ ನಲ್ಲಿ ಪುರುಷರನ್ನು ಖುಷಿಪಡಿಸಲು ಸುಲಭ ಉಪಾಯ ಏನು ಗೊತ್ತಾ?!

ಬೆಂಗಳೂರು: ಪುರುಷ ಸಂಗಾತಿಯನ್ನು ಮಧು ಮಂಚದಲ್ಲಿ ಖುಷಿಪಡಿಸಲು ಏನು ಮಾಡಬೇಕು? ಕೆಲವು ಉಪಾಯಗಳು ಇಲ್ಲಿವೆ ...