ಜೀವನಶೈಲಿ, ಆಹಾರ ಪದ್ಧತಿಯಿಂದಾಗಿ ಸ್ಥೂಲಕಾಯವೆಂಬುದು ಮಾಮೂಲಾಗಿಬಿಟ್ಟಿದೆ. ತೆಳ್ಳಗೆ, ಆರೋಗ್ಯವಂತವಾಗಿ ಕಾಣಿಸಿಕೊಳ್ಳಬೇಕೆಂದು ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ? ತೆಳ್ಳಗಾಗಬೇಕೆಂದು ಏನೇನೋ ಡಯಟ್, ವ್ಯಾಯಾಮ, ಜಿಮ್, ವಾಕಿಂಗ್ ಹೀಗೆ ನಾನಾ ಕಸರತ್ತುಗಳನ್ನು ಮಾಡುವವರಿದ್ದಾರೆ. ಆದರೆ, ನಮ್ಮ ತೂಕದ ಮೇಲೆ ನಿದ್ರೆ ಕೂಡ ಪರಿಣಾಮ ಬೀರುತ್ತದೆ ಎಂಬುದು ನಿಮಗೆ ಗೊತ್ತಿದೆಯಾ? ನಿದ್ರೆ ಮಾಡುವಾಗ ನಮ್ಮ ತೂಕ ಹೆಚ್ಚಾಗುತ್ತದಾ? ನೀವು ತೂಕ ಇಳಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಯಾವುದೂ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದಾದರೆ ನಿದ್ರೆಯ ಸಮಸ್ಯೆಯೂ