ಬೆಂಗಳೂರು: ಮಹಿಳೆಯರ ಋತುಮತಿಯಾಗುವ ದಿನದ ಬಗ್ಗೆ ಹಲವು ತಪ್ಪು ಕಲ್ಪನೆಗಳಿವೆ. ಅದೊಂದು ನೈಸರ್ಗಿಕ ಪ್ರಕ್ರಿಯೆಯಷ್ಟೇ ಎಂದು ಎಷ್ಟೇ ಹೇಳಿದರೂ ಕೆಲವು ಆಚರಣೆಗಳನ್ನು ನಾವು ಬಿಡಲ್ಲ. ದೇವಾಲಯಕ್ಕೆ ಹೋಗುವುದು, ಶುಭ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅವರವರ ನಂಬಿಕೆ ಬಿಟ್ಟ ವಿಚಾರ. ಅದನ್ನು ಪ್ರಶ್ನಿಸುವ ಹಾಗಿಲ್ಲ. ಇದರ ಹೊರತಾಗಿಯೂ ಕೆಲವು ಕೆಟ್ಟ ನಂಬಿಕೆಗಳಿವೆ.ಅಡುಗೆ ಮಾಡಬಾರದು ಋತುಮತಿಯಾದ ಆ ಮೂರು ದಿನಗಳು ಅಡುಗೆ ಮಾಡಬಾರದು. ಪ್ರತ್ಯೇಕವಾಗಿ ಕೂರಬೇಕು ಎಂಬ ಪದ್ಧತಿ ಈಗಲೂ ಕೆಲವೆಡೆ ಆಚರಣೆಯಲ್ಲಿದೆ.