ಬೆಂಗಳೂರು: ಹಾಗಲಕಾಯಿ ರುಚಿ ಮಾತ್ರ ಕಹಿ. ಆದರೆ ಇದರ ಗುಣ ಸಿಹಿ. ಅಂದರೆ ನೀಡುವ ಆರೋಗ್ಯಕರ ಗುಣಗಳು ನಮ್ಮ ಜೀವನವನ್ನು ಸಿಹಿ ಮಾಡುತ್ತದೆ. ಯಾವೆಲ್ಲಾ ರೋಗಕ್ಕೆ ಹಾಗಲಕಾಯಿ ಮನೆ ಮದ್ದು ನೋಡೋಣ.ಹಾಗಲಕಾಯಿಯಲ್ಲಿ ವಿಟಮಿನ್ ಸಿ, ಕಬ್ಬಿಣದಂಶ, ಪೊಟೋಶಿಯಂ ಮುಂತಾದ ಹಲವು ಅಂಶಗಳಿವೆ. ಇದರ ಜ್ಯೂಸ್ ಕಹಿಯಾದರೂ ಹಲವು ಆರೋಗ್ಯಕರ ಅಂಶಗಳು ಇದರಲ್ಲಿವೆ. ಒಂದೊಂದಾಗಿ ನೋಡೋಣ.ಮುಖ್ಯವಾಗಿ ಇದು ರಕ್ತದಲ್ಲಿ ಸಕ್ಕರೆ ಅಂಶ ಸಮತೋಲನದಲ್ಲಿರಿಸುತ್ತದೆ. ಇದು ಮಧುಮೇಹಿಗಳಿಗೆ ಇನ್ಸುಲಿನ್ ರೂಪದಲ್ಲಿ ಕೆಲಸ ಮಾಡುತ್ತದೆ.