ನಿಮ್ಮ ಅಡುಗೆ ಮನೆಯಲ್ಲೇ ದೊರೆಯುವ ಈ ಔಷಧೀಯ ಪದಾರ್ಥಗಳನ್ನು ಬಳಸಿಕೊಂಡು ಫುಡ್ ಪಾಯಿಸನ್ ಆಹಾರ ವಿಷವಾಗುವಂತಹ ರೋಗಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. - ಫುಡ್ ಪಾಯ್ಸನ್ ಆದಾಗ ಏಲಕ್ಕಿಯು ಉತ್ತಮ ಪರಿಹಾರವನ್ನು ನೀಡುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುವ ಏಲಕ್ಕಿಯು ವಾಕರಿಕೆ, ವಾಂತಿ ಮೊದಲಾದ ಫುಡ್ ಪಾಯ್ಸನ್ ರೋಗ ಲಕ್ಷಣಗಳನ್ನು ಹೋಗಲಾಡಿಸುತ್ತದೆ.ಈ ಪಟ್ಟಿಯಲ್ಲಿರುವ ಇತರ ಮನೆಮದ್ದುಗಳಂತೆಯೇ ಏಲಕ್ಕಿ ಕೂಡ ರೋಗನಿರೋಧಕ ಸಾಮರ್ಥ್ಯವನ್ನು ಪಡೆದುಕೊಂಡಿದೆ. - ಶುಂಠಿಯು ವಾಕರಿಕೆ, ವಾಂತಿ ಮೊದಲಾದ ಲಕ್ಷಣಗಳನ್ನು ಗುಣಪಡಿಸುತ್ತದೆ.