ಬೆಂಗಳೂರು: ಮುಟ್ಟಿನ ಸಂದರ್ಭಗಳಲ್ಲಿ ಕೆಲವು ಆಹಾರಗಳು ನಮ್ಮ ದೇಹ ಪ್ರಕೃತಿಗೆ ಸಂಬಂಧಿಸಿದ ಹಾಗೆ ಸೇವಿಸದೇ ಇದ್ದರೆ ಒಳ್ಳೆಯದು. ಕೆಲವು ಆಹಾರಗಳು ಅಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ. ಅದೇ ರೀತಿ ಚಹಾ ಕುಡಿಯುವುದು ಉತ್ತಮವಲ್ಲ ಎಂದು ತಜ್ಞರು ಹೇಳುತ್ತಾರೆ. ಇದು ಅಚ್ಚರಿಯಾದರೂ ಸತ್ಯ. ಋತುಮತಿಯಾದ ದಿನಗಳಲ್ಲಿ ಚಹಾ ಸೇವಿಸದೇ ಇದ್ದರೆ ಒಳ್ಳೆಯದು.ಹೆಚ್ಚಿನ ಹೆಣ್ಣು ಮಕ್ಕಳಿಗೆ ಮುಟ್ಟಿನ ದಿನಗಳಲ್ಲಿ ಬೆನ್ನು, ಸೊಂಟ ನೋವು ಅಥವಾ ಮಾಂಸ ಖಂಡಗಳ ಸೆಳೆತದಂತಹ ಸಮಸ್ಯೆಗಳಿದ್ದೇ ಇರುತ್ತವೆ.