ನಿಯಮಿತವಾಗಿ ಎಲೆಕೋಸನ್ನು ಆಹಾರದಲ್ಲಿ ಸೇರಿಸಿಕೊಂಡರೆ ಆರೋಗ್ಯವು ಬಹುಬೇಗ ಸುಧಾರಿಸುವುದು. ಕಡಿಮೆ ಕ್ಯಾಲೋರಿ ಮತ್ತು ಪ್ರಮುಖ ಪೋಷಕಾಂಶಗಳಿಂದ ಕೂಡಿರುವ ಎಲೆಕೋಸು ಚಯಾಪಚಯ ಕ್ರಿಯೆಯನ್ನು ಸುಧಾರಿಸಿ, ವಿವಿಧ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಣದಲ್ಲಿ ಇಡುತ್ತದೆ. ಎಲೆ ಕೋಸು ಕಡಿಮೆ ಪ್ರಮಾಣದ ಕ್ಯಾಲೋರಿ, ಪ್ರೋಟೀನ್, ಫೋಲೇಟ್, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಮ್ ಅನ್ನು ಒಳಗೊಂಡಿರುತ್ತದೆ. ಇದು ವಿಟಮಿನ್ ಕೆ, ಬಿ6 ಮತ್ತು ಸಿ ಯಂತಹ ಜೀವಸತ್ವಗಳನ್ನು ಒಳಗೊಂಡಿದೆ. ಈ ಪೋಷಕಾಂಶಗಳು ಜೀರ್ಣ ಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ