ಬೆಂಗಳೂರು : ಮಕ್ಕಳು ಮಣ್ಣಿನಲ್ಲಿ ಆಟವಾಡಿದರೆ ಅವರ ಕೈಕಾಲುಗಳಲ್ಲಿ ಗುಳ್ಳೆಗಳು ಆಗುತ್ತದೆ. ಆದ್ದರಿಂದ ಮಕ್ಕಳನ್ನು ಮಣ್ಣಿನಲ್ಲಿ ಆಟವಾಡಲು ಬಿಡಬಾರದು ಎಂದು ಹೇಳುತ್ತಾರೆ. ಆದರೆ ಕೆಮ್ಮಣ್ಣಿನಲ್ಲಿ ಹಲವಾರು ರೀತಿಯ ಆರೋಗ್ಯಕಾರಿ ಲಾಭಗಳಿವೆ ಎನ್ನಲಾಗಿದೆ. ನಿಮ್ಮ ಮೈಮೇಲೆ ಸುಟ್ಟ ಕಲೆಗಳಿದ್ದರೆ ತಣ್ಣೀರಿನಲ್ಲಿ ಕೆಮ್ಮಣ್ಣನು ಕಲಸಿ ಚರ್ಮ ಸುಟ್ಟಿರುವ ಜಾಗಕ್ಕೆ ಲೇಪಿಸಿದರೆ ಉರಿ, ನೋವು ಕಡಿಮೆಯಾಗಿ ಗಾಯ ಬೇಗ ಗುಣವಾಗುತ್ತದೆಯಂತೆ. ಮುಖದಲ್ಲಿ ಕಪ್ಪು ಕಲೆಗಳು ಹೆಚ್ಚಾಗಿದ್ದರೆ ಕೆಮ್ಮಣ್ಣಿಗೆ ಮೊಸರು ಮತ್ತು ಪುದೀನಾ ಸೊಪ್ಪನ್ನು ಹಾಕಿ