ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಮಲಬದ್ಧತೆ ಎಲ್ಲರನ್ನೂ ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ಅದಕ್ಕೆ ನಾವು ಸೇವಿಸುವ ಆಹಾರವೂ ಕಾರಣ.ಬಾಳೆಹಣ್ಣು ಬಾಳೆಹಣ್ಣು ಸೇವನೆಯಿಂದ ಮಲಬದ್ಧತೆ ದೂರವಾಗುತ್ತದೆ ಎನ್ನಲಾಗುತ್ತದೆ. ಆದರೆ ಸರಿಯಾದ ಹಣ್ಣಾಗದ ಬಾಳೆಹಣ್ಣು ಸೇವನೆ ಮಲಬದ್ಧತೆಗೆ ಕಾರಣವಾಗಬಹುದು!ರೆಡ್ ಮೀಟ್ ರೆಡ್ ಮೀಟ್ ನಲ್ಲಿ ಕೊಬ್ಬಿನಂಶ ಅಧಿಕವಿದ್ದು, ಮಲಬದ್ಧತೆಗೆ ಕಾರಣವಾಗಬಹುದು. ಇದರಲ್ಲಿ ಕರಗುವ ನಾರಿನಂಶ ಕಡಿಮೆ ಇರುವುದರಿಂದ ಜೀರ್ಣಕ್ರಿಯೆ ಕಠಿಣ.ಸಂಸ್ಕರಿತ ಆಹಾರ ಸಂಸ್ಕರಿತ ಆಹಾರಗಳಲ್ಲಿ ನಾರಿನಂಶ ಕಡಿಮೆಯಿರುತ್ತದೆ. ಇದರಲ್ಲಿ ಕೊಬ್ಬಿನಂಶ ಮತ್ತು ಉಪ್ಪಿನಂಶ ಅಧಿಕವಿರುತ್ತದೆ.