ಬೆಂಗಳೂರು: ಹೆಚ್ಚಿನವರಿಗೆ ದೇಹ ತೂಕ ಕಡಿಮೆ ಮಾಡುವುದೇ ಚಿಂತೆ. ಅದಕ್ಕೆ ಏನೇನೋ ಡಯಟ್ ಮಾಡುತ್ತಾರೆ. ಆದರೆ ಅದಕ್ಕಿಂತ ಮೊದಲು ಈ ಆಹಾರಗಳ ಸೇವನೆಯನ್ನು ಬಿಡುವುದು ಒಳ್ಳೆಯದು. ತಂಪು ಪಾನೀಯಗಳು ಶಾಪಿಂಗ್ ಮಾಲ್ ಗೆ ಹೋದರೆ ರೆಫ್ರಿಜರೇಟರ್ ಒಳಗಿರುವ ಬಣ್ಣ ಬಣ್ಣದ ಜ್ಯೂಸ್ ನಮ್ಮನ್ನು ಆಕರ್ಷಿಸುತ್ತವೆ. ಆದರೆ ಈ ಜ್ಯೂಸ್ ನಿಮ್ಮಲ್ಲಿ ಬೊಜ್ಜು ಬೆಳೆಯಲು ಕಾರಣವಾಗಬಹುದು. ಇದರಲ್ಲಿ ಸುದೀರ್ಘ ಕಾಲ ಬಾಳಿಕೆ ಬರಲು ಹಾಕುವ ರಾಸಾಯನಿಕಗಳು ನಮ್ಮ ದೇಹದಲ್ಲಿ ಬೇಡದ