ಬೆಂಗಳೂರು: ಕೂದಲು ಉದುರುವ ಸಮಸ್ಯೆಯೇ? ಏನೇನೋ ಔಷಧ ಸೇವಿಸಿ ಫಲವಾಗಿಲ್ಲವೇ? ಸಮಸ್ಯೆಯ ಮೂಲಕ್ಕೇ ಪರಿಹಾರ ನೀಡಿ. ಆಗ ಸಮಸ್ಯೆಯೂ ನಿವಾರಣೆಯಾಗುವುದು. ಕೂದಲು ಗಟ್ಟಿಯಾಗಬೇಕಾದರೆ ಯಾವೆಲ್ಲಾ ಪೋಷಕಾಂಶಗಳಿರುವ ಆಹಾರ ಸೇವಿಸಬೇಕು ನೋಡಿಕೊಳ್ಳಿ.ವಿಟಮಿನ್ ಎವಿಟಮಿನ್ ಎ ಅಂಗಾಂಶಗಳ ಬೆಳವಣಿಗೆಗೆ ಪೂರಕ. ಇದು ಒಣ ಮತ್ತು ಸೀಳು ಕೂದಲು ಆಗದಂತೆ ತಡೆಯುತ್ತದೆ. ಬಸಳೆ, ಪಾಲಕ್ ಸೊಪ್ಪು, ಕ್ಯಾರೆಟ್ ನಂತಹ ಆಹಾರ ಸೇವಿಸುವುದರಿಂದ ಸಾಕಷ್ಟು ವಿಟಮಿನ್ ಎ ಅಂಶ ದೊರಕುತ್ತದೆ.ವಿಟಮಿನ್ ಇ ಆರೋಗ್ಯಕರ ಕೂದಲುಗಳ ಬೆಳವಣಿಗೆಗೆ