ಮೂತ್ರ ಪಿಂಡಗಳನ್ನು ಶುದ್ಧಿಕರಿಸುತ್ತದೆಯಂತೆ ಈ ಸೊಪ್ಪಿನ ಕಷಾಯ

ಬೆಂಗಳೂರು, ಶುಕ್ರವಾರ, 8 ಜೂನ್ 2018 (14:06 IST)

ಬೆಂಗಳೂರು :  ಮಾನವ ದೇಹಕ್ಕೆ ಮೂತ್ರ ಪಿಂಡಗಳು ತುಂಬಾನೇ ಸಹಕಾರಿಯಾಗಿದೆ. ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕುವ ಕಾರ್ಯವನ್ನು ಇವುಗಳು ಮಾಡುತ್ತವೆ. ಮೂತ್ರಪಿಂಡಗಳು ಮಾನವನ ದೇಹಕ್ಕೆ ತುಂಬಾನೇ ಅತ್ಯಗತ್ಯವಾಗಿದೆ. ರಕ್ತವನ್ನು ಶುದ್ಧಿಕರಿಸುವ ಈ ಮೂತ್ರ ಪಿಂಡಗಳನ್ನು ನಾವು ಶುದ್ದೀಕರಿಸಬೇಕು. ಇದಕ್ಕೆ ಮದ್ದು ನಿಮ್ಮ ಮನೆಯೇ ಇದೆ. 

ಮನೆ ಮದ್ದು ತಯಾರಿಸುವ ವಿಧಾನ:

ಮೊದಲನೆಯದಾಗಿ ಒಳ್ಳೆಯ ಕೊತ್ತಂಬರಿ ಸೊಪ್ಪನ್ನು ತೊಳೆದು ಕತ್ತರಿಸಿ, ಒಂದು ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸ್ವಲ್ಪಹೊತ್ತು ನೆನೆಸಿಡಬೇಕು. ನಂತರ ಕೆಲವು ನಿಮಿಷಗಳ ಕಾಲ ಕುದಿಸಬೇಕು.ಕುದಿಸಿದ ನಂತರ ಪಾತ್ರೆಯನ್ನು ಸ್ಟೌ ನಿಂದ ಕೆಳಗಿಳಿಸಿ, ಮುಚ್ಚಳದಿಂದ ಮುಚ್ಚಿ ಸ್ವಲ್ಪ ಹೊತ್ತು ಆರಲು ಬಿಡಬೇಕು.  ಅದು ತಣ್ಣಗಾದ ಮೇಲೆ ,ಒಂದು ಶುಭ್ರವಾದ ಬಟ್ಟೆಯಿಂದ ಸೋಸಿಕೊಂಡು,ಫ್ರಿಡ್ಜ್ ನಲ್ಲಿಟ್ಟುಕೊಳ್ಳಬೇಕು.

 

ದಿನಕ್ಕೆ ಒಂದು ಲೋಟದಂತೆ ,ತಿಂಗಳಲ್ಲಿ ಎರಡು ಬಾರಿ ಈ ಕಷಾಯವನ್ನು ಸೇವಿಸಬೇಕು. ಇದನ್ನು ಕುಡಿದ ನಂತರ, ಶರೀರದಲ್ಲಿರುವ ಕಲ್ಮಶಗಳು ಹೊರಹೋಗುವುದರಿಂದ ಮೂತ್ರದ ಬಣ್ಣ ಬದಲಾಗುತ್ತದೆ. ಈ ಕಷಾಯದ ಒಟ್ಟಿಗೆ ಪ್ರತಿ ದಿನವೂ ಸಾಧ್ಯವಾದಷ್ಟು ದ್ರವ ಪದಾರ್ಥಗಳನ್ನು ಸೇವಿಸುವುದರಿಂದ ಅಧಿಕ ಲಾಭವಾಗುತ್ತದೆ.

 

ಪ್ರಾಯದ ಹುಡುಗಿಯರು ಹಾಗು ಮಹಿಳೆಯರಿಗೆ ಋತು ಸಮಯದಲ್ಲಿ ಉಂಟಾಗುವ ನೋವುಗಳನ್ನು ಈ ಕಷಾಯ ನಿವಾರಿಸುತ್ತದೆ.

ಆದರೆ ಕಿಡ್ನಿ ಸ್ಟೋನ್ ಇರುವವರು ಈ ಕಷಾಯವನ್ನು ಸೇವಿಸಬಾರದು. ಏಕೆಂದರೆ ಈ ಕಷಾಯವನ್ನು ಸೇವಿಸುವುದರಿಂದ ಇತರೆ ಸಮಸ್ಯೆಗಳು ಬರಬಹುದು ಹಾಗು ಗರ್ಭಿಣಿ ಹೆಂಗಸರು ಈ ಕಷಾಯವನ್ನು ಸೇವಿಸಬೇಕಾದರೆ ವೈದ್ಯರ ಸಲಹೆ ಪಡೆದುಕೊಳ್ಳಬೇಕು.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹೊಟ್ಟೆ ಉಬ್ಬರದ ಸಮಸ್ಯೆಗೆ ಪರಿಹಾರಗಳು

ಇತ್ತೀಚಿನ ದಿನಗಳಲ್ಲಿ ಹೊಟ್ಟೆ ಉಬ್ಬರ ನಮ್ಮಲ್ಲಿ ಕಾಡುವಂತಹ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಕೆಲವೊಮ್ಮೆ ...

news

ಸೆಕ್ಸ್ ನಲ್ಲಿ ಪುರುಷರನ್ನು ಖುಷಿಪಡಿಸಲು ಸುಲಭ ಉಪಾಯ ಏನು ಗೊತ್ತಾ?!

ಬೆಂಗಳೂರು: ಪುರುಷ ಸಂಗಾತಿಯನ್ನು ಮಧು ಮಂಚದಲ್ಲಿ ಖುಷಿಪಡಿಸಲು ಏನು ಮಾಡಬೇಕು? ಕೆಲವು ಉಪಾಯಗಳು ಇಲ್ಲಿವೆ ...

news

ರುಚಿಯಾದ ಅಪ್ಪಿ ಪಾಯಸ ಮಾಡುವುದು ಹೇಗೆಂದು ಗೊತ್ತಾ….?

ಬೆಂಗಳೂರು: ಅಪ್ಪಿ ಪಾಯಸ ತಿನ್ನಲು ಬಲು ರುಚಿಕರವಾಗಿರುತ್ತದೆ. ವಿಶೇಷ ಸಂದರ್ಭಗಳಲ್ಲಿ ಈ ಪಾಯಸವನ್ನು ...

news

ಒತ್ತಡದ ಸಮಸ್ಯೆಗೆ ಬೈ ಹೇಳಿ..!!

ಈಗೀಗ ಹೆಚ್ಚಿನ ಜನರಲ್ಲಿ ಕಂಡುಬರುವ ಸಮಸ್ಯೆಗಳಲ್ಲಿ ಒತ್ತಡದ ಸಮಸ್ಯೆಯೂ ಒಂದು. ಹೆಚ್ಚಿನ ಜನರಿಗೆ ತಮಗೆ ಇರುವ ...