ಬೆನ್ನು ನೋವು, ಸೊಂಟನೋವು ನಿವಾರಣೆಗೆ ಉತ್ತಮ ಪರಿಣಾಮಕಾರಿ ಈ ಲೇಹ

ಬೆಂಗಳೂರು| pavithra| Last Modified ಗುರುವಾರ, 15 ಆಗಸ್ಟ್ 2019 (08:27 IST)
ಬೆಂಗಳೂರು : ಹೆಚ್ಚನವರು ಇತ್ತೀಚಿನ ದಿನಗಳಲ್ಲಿ ಬೆನ್ನು ನೋವು ಹಾಗೂ ಸೊಂಟ ನೋವಿನಿಂದ ನರಳುತ್ತಿರುತ್ತಾರೆ. ಕೆಲಸದ ಒತ್ತಡದಿಂದ ಅತಿಯಾದ ಬೆನ್ನು ನೋವು ಹಾಗೂ ಸೊಂಟ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.
1/4 ಕಪ್ ಮೆಂತ್ಯ ರಾತ್ರಿ ನೆನೆಹಾಕಿ ಬೆಳಿಗ್ಗೆ ಅದನ್ನು ರುಬ್ಬಿ ಅದನ್ನು ಚೆನ್ನಾಗಿ ಬೇಯಿಸಬೇಕು.  ನಂತರ 1/4 ಕಪ್ ತುಪ್ಪವನ್ನು ಹಾಕಿ ತಳ ಇಡಿಯಾದಂತೆ ಮಿಶ್ರಣವನ್ನು ಕಲಸುತ್ತಾ ಬನ್ನಿ ಮತ್ತು 1/2 ಕಪ್ ಬೆಲ್ಲವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದ ನಂತರ ತುಪ್ಪವನ್ನು ತಳ ಬುಡುತ್ತ ಬಂದರೆ ಮೆಂತ್ಯ ಲೇಹ ತಯಾರಾಗುತ್ತೆ.


ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಂಡರೆ ಬೆನ್ನು ನೋವು ಹಾಗೂ ಸೊಂಟ ನೋವು ಮಂಗಮಾಯವಾಗುತ್ತದೆ. ಅಲ್ಲದೇ ಬಾಣಂತಿರು ಮತ್ತು ಬೆನ್ನು ನೋವು ಸೊಂಟನೋವು  ಇರುವಂತವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತ್ಯ ಲೇಹವನ್ನು ತೆಗೆದುಕೊಳ್ಳುವುದರಿಂದ ನೋವುಗಳು ಕಡಿಮೆ ಆಗುತ್ತದೆ.

ಇದರಲ್ಲಿ ಇನ್ನಷ್ಟು ಓದಿ :