ಬೆಂಗಳೂರು : ತಾಯಿಯಾಗಬೇಕೆಂಬ ಸಂಭ್ರಮ ಪ್ರತಿ ಹೆಣ್ಣಿನಲ್ಲಿಯೂ ಸಹಜ. ಬದಲಾದ ಜೀವನಶೈಲಿಯಿಂದ ಒತ್ತಡದ ಬದುಕು ಹಾಗೂ ಇತರೆ ವಿವಿಧ ಕಾರಣಗಳಿಂದ ಹೆಣ್ಣು ಗರ್ಭ ಧರಿಸುವುದೇ ಕಷ್ಟ. ಉದ್ಯೋಗಸ್ಥ ಮಹಿಳೆಯಂತೂ ವಿವಿಧ ಕಾರಣಗಳಿಂದ ತಾಯಿಯಾಗುವ ಸುಸಂಭ್ರಮವನ್ನು ಮುಂದೂಡುತ್ತಲೇ ಇರುತ್ತಾಳೆ. ಇಂಥ ಸಮಸ್ಯೆ ಎದುರಿಸುತ್ತಿರುವವರಿಗೆ ಮೀನು ಮತ್ತು ಸಮುದ್ರಾಹಾರ ನೆರವಾಗುತ್ತೆ. ಹೌದು. ಅಧಿಕ ಪ್ರೊಟೀನ್ ಹಾಗೂ ಪೋಷಕಾಂಶಗಳ ಆಗರವಾಗಿರುವ ಸಮುದ್ರಾಹಾರದಿಂದ ದಂಪತಿಯ ಲೈಂಗಿಕ ಸಾಮರ್ಥ್ಯ ಹೆಚ್ಚಿಸಿ, ಗರ್ಭ ಧರಿಸಲು ನೆರವಾಗುತ್ತದೆ, ಎಂಬುದನ್ನು ಎಂಡೋಕ್ರೈನ್