ಬೆಂಗಳೂರು : ದೇಹ ಫಿಟ್ ಆಗಿ, ಆರೋಗ್ಯವಾಗಿರಬೇಕು ಎಂದು ಹಲವರು ವ್ಯಾಯಾಮ ಮಾಡುತ್ತಾರೆ. ಆದರೆ ಅಗತ್ಯಕ್ಕಿಂತ ಹೆಚ್ಚು ವ್ಯಾಯಾಮ ಮಾಡುವುದು ದೇಹದ ಆರೋಗ್ಯಕ್ಕೆ ಮಾರಕ ಎಂಬುದು ತಜ್ಞರು ಹೇಳುತ್ತಾರೆ. ಅಗತ್ಯಕ್ಕಿಂತ ಹೆಚ್ಚು ವ್ಯಾಯಾಮ ಮಾಡಿದರೆ ಈ ಸಮಸ್ಯೆ ಎದುರಾಗಬಹುದು. *ಹೆಚ್ಚು ವ್ಯಾಯಾಮ ಮಾಡುವುದರಿಂದ ಪದೇ ಪದೇ ಅನಾರೋಗ್ಯದಿಂದ ಬಳಲಬೇಕಾಗಬಹುದು.*ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ.*ಶಕ್ತಿಯುತರಾಗುವ ಬದಲು ಮತ್ತಷ್ಟು ಬಲಹೀನರಾಗಬೇಕಾಗುತ್ತದೆ.*ಹೆಚ್ಚು ವ್ಯಾಯಾಮ ಮಾಡುವುದರಿಂದ ದೇಹದಲ್ಲಿ ಒತ್ತಡವನ್ನು ಸೃಷ್ಟಿಸುವ ಹಾರ್ಮೋನ್ ಉತ್ಪತ್ತಿಯಾಗುತ್ತದೆ.