ಬೆಂಗಳೂರು: ಇಂಗು ನಮ್ಮ ಅಡುಗೆ ಮನೆಯಲ್ಲಿರುವ ಸಾಮಾನ್ಯ ಬಳಕೆ ವಸ್ತು. ಇದರಲ್ಲಿ ಹಲವಾರು ಔಷಧೀಯ ಗುಣಗಳೂ ಇವೆ. ಇಂಗು ತಿನ್ನುವುದರ ಮೂರು ಲಾಭಗಳು ಏನೇನು ನೋಡೋಣ. ಹೊಟ್ಟೆ ನೋವಿಗೆ ಇಂಗು ತಿನ್ನುವುದರಿಂದ ಹೊಟ್ಟೆ ನೋವಿಗೆ ಪರಿಹಾರ ಸಿಗುತ್ತದೆ. ಅಜೀರ್ಣ ಅಥವಾ ಅಸಿಡಿಟಿಯಿಂದಾಗಿ ಹೊಟ್ಟೆ ನೋವಾಗುತ್ತಿದ್ದರೆ ಒಂದು ಲೋಟ ಮಜ್ಜಿಗೆಗೆ ಒಂದು ಚಿಟಿಕಿ ಇಂಗು ಸೇರಿಸಿ ಸೇವಿಸಿ.ಅಸ್ತಮಾಗೆ ಪರಿಹಾರ ಅಸ್ತಮಾ, ಬ್ರಾಂಕೈಟಿಸ್ ನಂತಹ ಉಸಿರಾಟದ ಸಮಸ್ಯೆಯಿರುವವರು ಹಾಗೂ ಅಲ್ಸರ್, ಎಡೆಬಿಡದ