ಬೆಂಗಳೂರು : ಬೆಂಕಿ ತಾಗಿ ಗಾಯಗಳಾಗುತ್ತವೆ. ಈ ಗಾಯಗಳು ಚಿಕ್ಕದಾಗಿದ್ದರೂ ತುಂಬಾ ನೋವಿನಿಂದ ಕೂಡಿರುತ್ತದೆ. ಈ ಸುಟ್ಟ ಗಾಯಗಳು ಬೇಗ ವಾಸಿಯಾಗಲು ಈ ಮನೆಮದ್ದನ್ನು ಹಚ್ಚಿ. ಅಲೋವೆರಾ ಜೆಲ್ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಮತ್ತು ಉರಿಯೂತದ ಗುಣಗಳನ್ನು ಹೊಂದಿದೆ. ಇದನ್ನು ಸುಟ್ಟ ಗಾಯಗಳಿಗೆ ಹಚ್ಚಿದರೆ ಆ ಗಾಯದ ಸುತ್ತಲಿನ ರಕ್ತಪರಿಚಲನೆಯನ್ನು ಉತ್ತೇಜಿಸುತ್ತದೆ. ಮತ್ತು ಬ್ಯಾಕ್ಟೀರಿಯಾ ಬೆಳವಣೆಗೆಯನ್ನು ತಡೆಯುತ್ತದೆ. ಇದರಿಂದ ಸೋಂಕು ಉಂಟಾಗುವುದಿಲ್ಲ. ಜೇನುತುಪ್ಪ ಸುಟ್ಟ ಗಾಯಗಳ ಚಿಕಿತ್ಸೆಗೆ ಬಹಳ ಸಹಕಾರಿ.