ಒತ್ತಡದ ಜೀವನದಲ್ಲಿ ಆರೋಗ್ಯದ ಬಗ್ಗೆ ಗಮನ ನೀಡಲು ಸಮಯ ಸಿಗೋದಿಲ್ಲ. ಸಿಕ್ಕಿದ್ದನ್ನು ತಿನ್ನೋದು, ಸಿಕ್ಕಾಗ ಮಲಗೋದು ಹೀಗೆ ಅಸ್ತವ್ಯಸ್ತ ಜೀವನ ಶೈಲಿ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರ್ತಾಯಿದೆ. ಸ್ಥೂಲಕಾಯದ ಸಮಸ್ಯೆ ನಮ್ಮನ್ನು ಕಾಡ್ತಿದೆ. ಆರೋಗ್ಯಕರ ಆಹಾರ ಮತ್ತು ವ್ಯಾಯಾಮದಿಂದ ತೂಕ ಇಳಿಸಿಕೊಳ್ಳಬಹುದು ಎಂಬುದು ಎಲ್ಲರಿಗೂ ಗೊತ್ತು. ಆದ್ರೆ ವ್ಯಾಯಾಮಕ್ಕೆ ಸಮಯ ಸಿಗೋದಿಲ್ಲ. ಏನು ಮಾಡೋದು ಅಂತಾ ಅನೇಕರು ಪ್ರಶ್ನಿಸ್ತಾರೆ. ನಿಮಗೂ ವ್ಯಾಯಾಮಕ್ಕೆ ಸಮಯ ಸಿಗ್ತಿಲ್ಲ ಎಂದಾದ್ರೆ ಚಿಂತೆ ಬೇಡ.