ಬೆಂಗಳೂರು : ಕೆಲವರಿಗೆ ಕಾಲಿನಲ್ಲಿ ಆಣೆಯಾಗುತ್ತದೆ. ಇದು ಹೆಚ್ಚಾಗಿ ಹೊಲದಲ್ಲಿ ಕೆಲಸ ಮಾಡುವವರಿಗೆ ಹಾಗೂ ನೀರಿನಲ್ಲಿ ಕೆಲಸ ಮಾಡುವವರಿಗೆ ಹೆಚ್ಚಾಗಿ ಕಂಡುಬರುತ್ತದೆ. ಇದನ್ನು ಮನೆಮದ್ದಿನಿಂದ ಗುಣಪಡಿಸಬಹುದು. ಬಾಳೆ ಹಣ್ಣಿನ ಸಿಪ್ಪೆಯಲ್ಲಿರುವ ಬಿಳಿ ತಿರುಳನ್ನು ತೆಗೆದುಕೊಂಡು ಆಣೆಯ ಮೇಲಿಟ್ಟು ಬ್ಯಾಂಡೇಜ್ ಕಟ್ಟಿ. ಇದನ್ನು ಪ್ರತಿದಿನ ರಾತ್ರಿ ಒಂದು ತಿಂಗಳ ತನಕ ಮಾಡಿದರೆ ಆಣೆ ಗುಣವಾಗುತ್ತದೆ. ಕಾಯಿ ಪಪ್ಪಾಯವನ್ನು ಪೇಸ್ಟ್ ಮಾಡಿ ಆಣೆಯ ಮೇಲಿಟ್ಟು ಬ್ಯಾಂಡೇಜ್ ಕಟ್ಟಿ. ಇದನ್ನು ಪ್ರತಿದಿನ ರಾತ್ರಿ ಮಾಡಬೇಕು.