ಬೆಂಗಳೂರು: ಉದುರುವಿಕೆ ಈಗ ಎಲ್ಲರನ್ನು ಕಾಡುವ ಸಮಸ್ಯೆಯಾಗಿದೆ. ಮಾರುಕಟ್ಟೆಯ ಯಾವುದೇ ಶಾಂಪೂ, ಹಾಗೂ ಎಣ್ಣೆಗಳು ಕೂಡ ಪರಿಣಾಮ ಬೀರುವುದಿಲ್ಲ. ಕೂದಲು ಉದುರುವುದಕ್ಕೆ ಕಾರಣ ಏನೇ ಇದ್ದರೂ, ಮನೆ ಮದ್ದುಗಳನ್ನು ಬಳಸಿ ನಾವು ಅದನ್ನು ತಡೆಗಟ್ಟಬಹುದು. ಕೂದಲು ಉದುರುವುದನ್ನು ಕಡಿಮೆ ಮಾಡುವುದಕ್ಕೆ ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್. ಮೆಂತ್ಯೆದಿಂದ ದಟ್ಟ ಕೂದಲು: ಕೂದಲು ಉದುರುವುದನ್ನು ತಡೆಗಟ್ಟಲು ಹಾಗೂ ಕೂದಲ ಮರುಬೆಳವಣಿಗೆಗೆ ಮೆಂತ್ಯೆ ಬಹಳ ಪರಿಣಾಮಕಾರಿ. ಮೆಂತ್ಯೆಯಲ್ಲಿರುವ ಕೆಲವು ಪೋಷಕಾಂಶಗಳು ಕೂದಲ ಬೆಳವಣಿಗೆಗೆ ಸಹಕಾರಿ.ರಾತ್ರಿ