ಬೆಂಗಳೂರು: ಮುಟ್ಟಿನ ಸಮಯದಲ್ಲಿ ಕೈ ಕಾಲು ಸೆಳೆತ, ಹೊಟ್ಟೆ ನೋವು ಇತ್ಯಾದಿ ಸ್ತ್ರೀಯರಲ್ಲಿ ಕಂಡುಬರುವುದು ಸಾಮಾನ್ಯ. ಕೆಲವರಿಗೆ ಆ ಸಮಯದಲ್ಲಿ ಜನನಾಂಗದಲ್ಲಿ ವಿಪರೀತ ನೋವು ಬಂದು ಬಹಿರ್ದೆಸೆಗೂ ಕಷ್ಟವಾಗುತ್ತದೆ.ಅಂತಹ ಮಹಿಳೆಯರು ಮಾತ್ರೆ, ಔಷಧಿ ಎಂದು ಹೋಗುವ ಬದಲು ಕೆಲವು ಮನೆ ಮದ್ದು ಮಾಡಿ ಪರಿಹಾರ ಕಂಡುಕೊಳ್ಳಬಹುದು.ಮುಟ್ಟಿನ ದಿನಗಳಲ್ಲಿ ಮಹಿಳೆಯರು ದೇಹ ನಿರ್ಜಲೀಕರಣಕ್ಕೊಳಗಾಗದಂತೆ ನೋಡಿಕೊಳ್ಳಬೇಕು. ಹೆಚ್ಚು ನೀರು, ದ್ರವಾಂಶ ಸೇವಿಸಬೇಕು. ಆದಷ್ಟು ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಸೇವಿಸಿದರೆ ಉತ್ತಮ. ಸ್ನಾನಕ್ಕೆ