ಬೆಂಗಳೂರು: ಮಲಗಿದ ತಕ್ಷಣ ಕೆಲವೊಮ್ಮೆ ನಿದ್ರೆ ಬಾರದೇ ಹಾಸಿಗೆಯಲ್ಲಿ ಹೊರಳಾಡುತ್ತಾ ಕಾಲ ಕಳೆಯಬೇಕಾಗುತ್ತದೆ. ಈ ಸಮಸ್ಯೆ ಪರಿಹಾರಕ್ಕೆ ಕೆಲವು ಟಿಪ್ಸ್ ಇಲ್ಲಿದೆ ನೋಡಿ.ಒಂದೇ ಭಂಗಿಯಲ್ಲಿ ಮಲಗಿ ಪ್ರತಿನಿತ್ಯ ಒಂದೇ ಭಂಗಿಯಲ್ಲಿ ಮಲಗಿ ನಿದ್ರಿಸುವುದನ್ನು ಅಭ್ಯಾಸ ಮಾಡಿ. ಇದರಿಂದ ನಿಮ್ಮ ದೇಹ, ಮನಸ್ಸು ಇದಕ್ಕೆ ಒಗ್ಗಿಕೊಳ್ಳುತ್ತದೆ.ಬರೆಯುತ್ತಾ ಕೂರಿ ಒಂದು ಡೈರಿ ತೆಗೆದುಕೊಂಡು ಇಂದು ಏನೇನು ಮಾಡಿದೆ, ನಿಮ್ಮ ಸುತ್ತಮುತ್ತಲಿನ ವಿಚಾರಗಳ ಬಗ್ಗೆ ಬರೆಯುತ್ತಾ ಕೂತರೆ ತಾನಾಗೇ ತೂಕಡಿಸುತ್ತದೆ.ಮಲಗುವ ಮೊದಲು ವ್ಯಾಯಾಮ ಬೇಡ