ಬೆಂಗಳೂರು: ನಿದ್ರೆ ಬರುತ್ತಿಲ್ಲವೆಂದು ರಾತ್ರಿಯೆಲ್ಲಾ ಒದ್ದಾಡುತ್ತೀರಾ? ಹಾಗಿದ್ದರೆ ನಿಮ್ಮ ಆಹಾರ ಕ್ರಮದಲ್ಲಿ ಕೊಂಚ ಬದಲಾವಣೆ ತನ್ನಿ. ನಿದ್ರೆ ಬರಿಸುವ ಆಹಾರ ಸೇವಿಸಿ. ಅವು ಯಾವುವು ತಿಳಿಯಬೇಕಾ? ಹಾಗಿದ್ದರೆ ಈ ಸ್ಟೋರಿ ಓದಿ.ಬಾಳೆ ಹಣ್ಣು ರಾತ್ರಿ ಮಲಗುವ ಮುಂಚೆ ಬಾಳೆ ಹಣ್ಣು ತಿಂದು ಹಾಲು ಕುಡಿಯುವ ಅಭ್ಯಾಸ ಕೆಲವರಿಗೆ ಇರುತ್ತದೆ. ಬಾಳೆ ಹಣ್ಣಿನಲ್ಲಿ ಪೊಟೇಷಿಯಂ ಮತ್ತು ಮ್ಯಾಗ್ನಿಶಿಯಂ ಅಂಶ ಸಾಕಷ್ಟಿದ್ದು, ಇದು ಮಾಂಸ ಖಂಡಗಳು ರಿಲ್ಯಾಕ್ಸ್ ಆಗುವಂತೆ ಮಾಡುತ್ತದೆ. ಇದರಿಂದ ಸುಖ