ಬೆಂಗಳೂರು : ಟೊಮೆಟೊ ದಲ್ಲಿ ಹೆಚ್ಚಿನ ಮಟ್ಟದ ಆ್ಯಂಟಿಆಕ್ಸಿಡೆಂಟ್ ಗಳು ಇರುತ್ತವೆ. ಇದು ತಲೆಬುರುಡೆಯಲ್ಲಿ ಇರುವಂತಹ ಕಲ್ಮಷವನ್ನು ತೆಗೆದು, ಕೂದಲನ್ನು ಬುಡದಿಂದಲೇ ಬಲಪಡಿಸಿ, ಕೂದಲ ಸಮಸ್ಯೆಯನ್ನು ನಿವಾರಿಸುತ್ತದೆ. ಒಂದು ಪಾತ್ರೆಯಲ್ಲಿ 2 ಚಮಚ ಲಿಂಬೆರಸ ಹಾಕಿ ಅದಕ್ಕೆ 3 ಹಣ್ಣಾದ ಟೊಮೆಟೊದ ತಿರುಳನ್ನು ಹಾಕಿ ಮಿಕ್ಸಿಗೆ ಹಾಕಿ ರುಬ್ಬಿಕೊಂಡು ಮೆತ್ತಗಿನ ಪೇಸ್ಟ್ ಮಾಡಿ. ಇದನ್ನು ಕೈಗಳ ಸಹಾಯದಿಂದ ತಲೆಬುರುಡೆಗೆ ಹಚ್ಚಿಕೊಳ್ಳಿ. 30ನಿಮಿಷ ಕಾಲ ಹಾಗೆ ಬಿಟ್ಟ ಬಳಿಕ ತಣ್ಣೀರಿನಿಂದ ತೊಳೆಯಿರಿ.