ತ್ವಚೆಯ ಕಾಂತಿ ಹೆಚ್ಚಿಸಲು ಬಳಸಿ ನೆಲ್ಲಿಕಾಯಿ ಫೇಸ್ ಸ್ಕ್ರಬ್

ಬೆಂಗಳೂರು| pavithra| Last Modified ಮಂಗಳವಾರ, 6 ಏಪ್ರಿಲ್ 2021 (08:02 IST)
ಬೆಂಗಳೂರು : ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಆರೋಗ್ಯಕ್ಕೆ ತುಂಬಾ ಉತ್ತಮ ಮಾತ್ರವಲ್ಲ ಇದರಿಂದ ಚರ್ಮದ ಸೌಂದರ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು. ಹಾಗಾದ್ರೆ ನೆಲ್ಲಿಕಾಯಿ ಫೇಸ್ ಸ್ಕ್ರಬ್ ತಯಾರಿಸಿ ಮುಖಕ್ಕೆ ಹಚ್ಚಿ.

ನೆಲ್ಲಿಕಾಯಿ ಪೇಸ್ಟ್ 2 ಚಮಚ, ಸಕ್ಕರೆ 2 ಚಮಚ, ರೋಸ್ ವಾಟರ್ 1 ಚಮಚ, ಈ ಎಲ್ಲಾ ಪದಾರ್ಥಗಳನ್ನು ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ ಸ್ಕ್ರಬ್ ಮಾಡಿ. ವೃತ್ತಾಕಾರದ ಚಲನೆಯಲ್ಲಿ ಸ್ಕ್ರಬ್ ಮಾಡಿ. 10 ನಿಮಿಷ ಬಿಟ್ಟು ಮುಖವನ್ನು ತಣ್ಣೀರಿನಿಂದ ವಾಶ್ ಮಾಡಿ.

ಇದನ್ನು 15 ದಿನಕ್ಕೊಮ್ಮೆ ಮಾಡಿ. ಇದು ಚರ್ಮದಲ್ಲಿರುವ ಸತ್ತ ಜೀವಕೋಶಗಳನ್ನು ನಿವಾರಿಸಿ ಹೊಸ ಚರ್ಮದ ರಚನೆಗೆ ಕಾರಣವಾಗುತ್ತದೆ. ಇದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :