ಮುಖದ ಮೇಲಿನ ಅನಗತ್ಯ ಕೂದಲು ತೆಗೆಯಲು ಮನೆಯಲ್ಲಿಯೇ ವ್ಯಾಕ್ಸ್ ತಯಾರಿಸಿ ಬಳಸಿ

ಬೆಂಗಳೂರು| pavithra| Last Modified ಶುಕ್ರವಾರ, 30 ಏಪ್ರಿಲ್ 2021 (06:45 IST)
ಬೆಂಗಳೂರು : ತಲೆಯ ಕೂದಲು ಮಹಿಳೆಯರ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ಮುಖದ ಮೇಲೆ ಮೂಡುವ ಅನಗತ್ಯ ಕೂದಲು ಮುಖದ ಸೌಂದರ್ಯವನ್ನು ಕೆಡಿಸುತ್ತದೆ. ಹಾಗಾಗಿ ಇದನ್ನು ನಿವಾರಿಸಲು ಮನೆಯಲ್ಲಿಯೇ ಹೇರ್ ರಿಮೂವಲ್ ವ್ಯಾಕ್ಸ್ ತಯಾರಿಸಿ ಬಳಸಿ.

5 ಚಮಚ ಸಕ್ಕರೆ, ½ ಚಮಚ ನಿಂಬೆ ರಸ, 3 ಚಮಚ ಜೇನುತುಪ್ಪ, 4 ಚಮಚ ನೀರು ಇವಿಷ್ಟನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಬಿಸಿ ಮಾಡಿ ಸಕ್ಕರೆ ಕರಗಿ ಪಾಕ ಮೇಣದ ರೀತಿ ಆಗುವವರೆಗೂ ಕುದಿಸಿ. ಬಳಿಕ ಅದನ್ನು ತಣ‍್ಣಗಾಗಲು ಬಿಡಿ.

ಮುಖಕ್ಕೆ ಪೌಡರ್ ಹಚ್ಚಿ ಕೂದಲು ಇದ್ದ ಕಡೆ ವ್ಯಾಕ್ಸ್ ಹಚ್ಚಿ ಅದು ಒಣಗಿದ ಬಳಿಕ ಕೈಯಿಂದ ಎಳೆಯಿರಿ. ಕೊನೆಯಲ್ಲಿ ಅಲೋವೆರಾ ಜೆಲ್ ಹಚ್ಚಿ.ಇದರಲ್ಲಿ ಇನ್ನಷ್ಟು ಓದಿ :